ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್. ಅಶೋಕ್
ಬೀದರ್: ಪ್ರಜ್ವಲ್ ರೇವಣ್ಣನವರ ಎಲ್ಲ ಎಪಿಸೋಡ್‌ಗಳನ್ನು ನೋಡಿದ್ದರೆ ಸಿಎಂ ಸಿದ್ದರಾಮಯ್ಯನವರೇ ಆತನನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದೆನಿಸುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ರೇವಣ್ಣ ಆಪ್ತರೇ ಸಂತ್ರಸ್ತ ಮಹಿಳೆಯನ್ನು ಎಸ್ಕೇಪ್ ಮಾಡಿದ್ದಾರೆಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ಪೊಲೀಸ್ ಮತ್ತು ಗುಪ್ತಚರ ಇಲಾಖೆ ರಾಜ್ಯ ಸರ್ಕಾರದ ಕೈಯಲ್ಲೇ ಇದೆ. ಹಾಸನದಲ್ಲಿ ವೋಟು ಹಾಕಿ 300 ಕಿ.ಮೀ ದೂರದ ವಾಯು ನಿಲ್ದಾಣದವರೆಗೆ ಹೇಗೆ ಹೋದರು? ಅವರನ್ನು ಬಿಟ್ಟವರು ಯಾರು ಎಂದು ಪ್ರಶ್ನಿಸಿದರು.





