September 17, 2024

ನಾಯಿಗಳಿಗೂ ಆಧಾರ್ ಕಾರ್ಡ್: QR ಆಧಾರಿತ ಟ್ಯಾಗ್

0

ದೆಹಲಿ: ನಾಯಿಗಳಿಗೂ ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದ್ದು, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆ.

ದಾರಿತಪ್ಪಿದ ನಾಯಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸ್ಥಳಾಂತರ ಮಾಡಲು ಎನ್ ಜಿಓ ಈ ಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮಾಹಿತಿ ಪ್ರಕಾರ ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ.

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದು ಮುಂಜಾನೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!