ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿದ್ದ ಪ್ರಧಾನಿ ಮೋದಿ ಚಿತ್ರ ನಾಪತ್ತೆ
ಬೆಂಗಳೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿತರಿಸುವ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ಮೋದಿ ಚಿತ್ರವನ್ನು ತೆಗೆದುಹಾಕಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಥರಹೇವಾರಿ ಚರ್ಚೆಗಳು ನಡೆಯುತ್ತಿವೆ. ಕೋವಿಶೀಲ್ಡ್ ಲಸಿಕೆಯಲ್ಲಿ ಅಡ್ಡಪರಿಣಾಮ ಇದೆ ಎಂದು ಅದರ ತಯಾರಕ ಕಂಪನಿ ಆಸ್ಟ್ರೆಜೆನೆಕಾ ಹೇಳಿಕೆ ನೀಡಿದ ಬಳಿಕ ಮೋದಿಯವರ ಚಿತ್ರ ತೆಗೆದುಹಾಕಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





