ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆ
ಬಾಘಲಪುರ: ಭೋಜ್ಪುರಿ ಖ್ಯಾತ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಅಮೃತಾ ಪಾಂಡೆ ಮದುವೆ ಕಾರ್ಯಕ್ರಮ ನಿಮಿತ್ತ ಬಿಹಾರದ ಭಾಘಲಪುರಕ್ಕೆ ಆಗಮಿಸಿದ್ದರು.
4 ದಿನಗಳ ಮದುವೆ ಕಾರ್ಯಕ್ರಮ ಮುಗಿಸಿ ಮುಂಬೈಗೆ ಮರಳಬೇಕಿದ್ದ ಅಮೃತಾ ಪಾಂಡೆ ನಿಧನರಾಗಿ್ದಾರೆ. ಅಪಾರ್ಟ್ಮೆಂಟ್ನಲ್ಲಿದ್ದ ಅಮೃತಾ ಪಾಂಡೆ ಸೀಲಿಂಗ್ ಫ್ಯಾನ್ಗೆ ಸೀರೆ ಕಟ್ಟಿ ತಮ್ಮ ಬದುಕು ಅಂತ್ಯಗೊಳಿಸಿದ್ದಾರೆ. ಅಮೃತಾ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.