December 15, 2025

ಅಜ್ಮೀರ್: ಮಸೀದಿಗೆ ನುಗ್ಗಿದ ಗುಂಪು  ಮಕ್ಕಳ ಮುಂದೆಯೇ ಧರ್ಮಗುರುಗೆ  ಥಳಿಸಿ ಬರ್ಬರ ಹತ್ಯೆ

0
image_editor_output_image-113559150-1714367915279

ಜೈಪುರ: ಮಸೀದಿಯಲ್ಲಿ ಧರ್ಮಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಮಾಸ್ಕ್ ಹಾಕಿ ಮಸೀದಿಗೆ ನುಗ್ಗಿದ ಮೂವರಿದ್ದ ಗುಂಪೊಂದು ಥಳಿಸಿ ಭೀಕರವಾಗಿ ಹತ್ಯೆಗೈದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಹಮ್ಮದ್ ತಾಹಿರ್ (30) ಮೃತ ಧರ್ಮಗುರು. ರಾಮಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚನ್ ನಗರ್‌ನಲ್ಲಿರುವ ಮಸೀದಿಯಲ್ಲಿ ಶನಿವಾರ ಸುಮಾರು ಮುಂಜಾನೆ 2 ಗಂಟೆಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಮಸೀದಿಗೆ ಪ್ರವೇಶಿಸಿ ಧರ್ಮಗುರು ಮುಹಮ್ಮದ್ ತಾಹಿರ್ ಅವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ಹಲ್ಲೆಯ ತೀವ್ರತೆಗೆ ತಾಹಿರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆಯುವ ಸಂದರ್ಭ ಮಸೀದಿಯ ಒಳಗೆ 6 ಮಕ್ಕಳಿದ್ದರು. ಮಕ್ಕಳು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಬಳಿಕ ಮೂವರು ಮೃತ ವ್ಯಕ್ತಿಯ ಮಕ್ಕಳಿಗೆ ಘಟನೆಯನ್ನು ಬಹಿರಂಗಪಡಿಸದಂತೆ ಬೆದರಿಕೆ ಒಡ್ಡಿ, ಅವರ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಘಟನೆ ಕುರಿತಂತೆ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಯಾರ ಬಂಧನವೂ ನಡೆದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!