April 12, 2025

ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ: ಸ್ಕೂಟರ್ ಸವಾರನಿಗೆ ಗಾಯ

0

ವಿಟ್ಲ : ಕಾರು ಮತ್ತು ಸ್ಕೂಟರ್‌ ನಡುವೆ ಅಪಘಾತ ಸಂಭವಿಸಿ ಸ್ಕೂಟರ್‌ ಸವಾರ ಗಾಯಗೊಂಡಿರುವ ಘಟನೆ ಕನ್ಯಾನ ದೇಲಂತಬೆಟ್ಟು ಚರ್ಚ್‌ ಬಳಿ ‌ನಡೆದಿದೆ.

ಕೊಳ್ನಾಡು ಗ್ರಾಮ, ಬಂಟ್ವಾಳ ನಿವಾಸಿ ಲಾಜರಸ್‌ ಡಿ ಸೋಜ ( 60) ಎಂಬವರು ದಿನಾಂಕ: 26-04-2024 ರಂದು ಮಧ್ಯಾಹ್ನ, ಕೆಲಸದ ನಿಮಿತ್ತ ತನ್ನ ಸ್ಕೂಟರನ್ನು (KA-19-EV-5698) ಚಲಾಯಿಸಿಕೊಂಡು ಹೋಗುವಾಗ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತಬೆಟ್ಟು ಚರ್ಚ್‌ ಬಳಿ ತಲುಪಿದಾಗ, ಉಕ್ಕುಡ ಕಡೆಯಿಂದ ಕನ್ಯಾನ ಕಡೆಗೆ ನೌಫಾಲ್ ಎ ಎಂಬವರು ಕಾರನ್ನು (KL-14-V-3704) ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿಲಾಜರಸ್‌ ಡಿ ಸೋಜರ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಪಿಲಾಜರಸ್‌ ಡಿ ಸೋಜರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದುಗಾಯಗೊಂಡಿದ್ದಾರೆ, ಗಾಯಾಳುವು ವಿಟ್ಲ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ . ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 76/2024 ಕಲಂ: 279,337 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

 

 

Leave a Reply

Your email address will not be published. Required fields are marked *

error: Content is protected !!