December 3, 2024

ಜಾನಿ ಬೆಸ್ಟೊ ಅಬ್ಬರದ ಶತಕ: ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ದಾಖಲೆ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್:

0

ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್‌ ನೀಡಿದ ಬೃಹತ್ ಗುರಿ ಎದುರು ದಿಟ್ಟ ಆಟವಾಡಿದ ಪಂಜಾಬ್‌ ಕಿಂಗ್ಸ್‌, 8 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರೈಡರ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕ 261 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌, ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು.

ಜಾನಿ ಬೆಸ್ಟೊ ಶತಕ (48 ಎಸೆತಗಳಲ್ಲಿ ಅಜೇಯ 108 ರನ್‌) ಸಿಡಿಸಿದರೆ, ಪ್ರಭಸಿಮ್ರನ್‌ ಸಿಂಗ್‌ (54 ರನ್‌) ಹಾಗೂ ಶಶಾಂಕ್‌ ಸಿಂಗ್‌ (68 ರನ್‌) ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

ಇವರ ಆಟದ ಬಲದಿಂದ ಕಿಂಗ್ಸ್‌ ಪಡೆ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬೆನ್ನಟ್ಟಿ ಗೆದ್ದ ತಂಡ ಎಂಬ ದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ 2023ರಲ್ಲಿ 259 ರನ್ ಬೆನ್ನಟ್ಟಿ ಗೆದ್ದದ್ದು ಈ ವರೆಗೆ ದಾಖಲೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!