February 3, 2026

ವಿದೇಶದಿಂದ ವಿಮಾನ ಮೂಲಕ ಮತದಾನಕ್ಕಾಗಿಯೇ ಆಗಮಿಸಿ ನೇರ ಪೋಲಿಂಗ್ ಬೂತ್ ಹೋಗಿ ಮತ ಚಲಾಯಿಸಿದ ಎಂ ಫ್ರೆಂಡ್ಸ್ ನ NRI ಸದಸ್ಯರು

0
image_editor_output_image1845265402-1714131326462

ಸೌದಿಅರೇಬಿಯಾದ ಅಲ್ ಖೋಬರ್ ನಲ್ಲಿ ಉದ್ಯಮಿಯಾಗಿರುವ ಎಂ.ಫ್ರೆಂಡ್ಸ್ ಎನ್ನಾರೈ ಟ್ರಸ್ಟಿ ಯೂನುಸ್ ಹಸನ್ ಅವರು ನಿನ್ಮೆ ರಾತ್ರಿ ಬಹರೈನ್ ಮೂಲಕ ಇಂದು ಬೆಳಿಗ್ಗೆ 06:45ಕ್ಕೆ ಮಂಗಳೂರು ವಿಮಾನ ತಲುಪಿದ್ದು, ನೇರವಾಗಿ ಮನೆಗೆ ತೆರಳದೇ ಹಂಪನಕಟ್ಟೆ ಸರಕಾರಿ ವಿದ್ಯಾಲಯದಲ್ಲಿ ಮತ ಚಲಾಯಿಸಿದರು. ಕೇವಲ ಚುನಾವಣೆ ಉದ್ದೇಶದಿಂದ ಎಂ.ಫ್ರೆಂಡ್ಸ್ ಎನ್ನಾರೈ ಸದಸ್ಯ ಹಾಗೂ ಪ್ರಸ್ತುತ ಚೆಯರ್ಮೇನ್ ಆಗಿರುವ ಝಕರಿಯಾ ಜೋಕಟ್ಟೆ, ಬಿ.ಎಂ.ಶರೀಫ್ ಬೋಳಾರ್, ಇರ್ಷಾದ್ ಬಿ.ಎಂ. ಅವರು ಸೌದಿ ಅರೇಬಿಯಾದಿಂದ ಹಾಗೂ ಅಬ್ದುಲ್ಲ ಮೋನು ಕತಾರ್ ನಿಂದ ಆಗಮಿಸಿ ಮತ ಚಲಾಯಿಸಿದರು. ಊರಲ್ಲಿದ್ದು ಮತ ಚಲಾಯಿಸದೇ ನಿರ್ಲಕ್ಷ್ಯ ತೋರುವ ಜನತೆಗೆ ಸಹಸ್ರಾರು ಮೊತ್ತ ಖರ್ಚು ಮಾಡಿ ಬಂದು ಮತ ಚಲಾಯಿಸುವ ಇಂತಹವರು ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!