February 3, 2026

ಫರಂಗಿಪೇಟೆ: ಅಶ್ರಫ್ ಕಲಾಯಿ ಕೊಲೆ ಆರೋಪಿ ಮೇಲೆ ಚೂರಿ ಇರಿತ

0
image_editor_output_image605780228-1714132175029

ಮಂಗಳೂರು: ಹೊರವಲಯದ ಫರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ಯುವಕನೊಬ್ಬನಿಗೆ ಚೂರಿ ಇರಿತ ನಡೆದ ಘಟನೆ ನಡೆದಿದೆ. ರೌಡಿ ಶೀಟರ್‌ ಪವನ್‌ ಎಂಬಾತ ಚೂರಿ ಇರಿತಕ್ಕೊಳಗಾದ ಯುವಕ.

ಎಸ್‌ಡಿಪಿಐ ಮುಖುಂಡ ಕಲಾಯಿ ಅಶ್ರಪ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವನ್‌ ಮೇಲೆ ಆತನ ಸ್ವೇಹಿತನೇ ಪೂರ್ವ ದ್ವೇಷದಲ್ಲಿ ಹಲ್ಲೆ ಮಾಡಿದ್ದಾನೆ. ಮತ್ತೊಬ್ಬ ರೌ‍ಡಿಶೀಟರ್‌ ಚರಣ್‌ ಎಂಬಾತ ಚೂರಿ ಇರಿದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚರಣ್‌ ಗಾಂಜಾ ವ್ಯಸನಿಯಾಗಿದ್ದು ವೈಯುಕ್ತಿಕ ದ್ವೇಷದಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಪವನ್‌ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಮಾಹಿತಿ ಇದೆ. ಬಂಟ್ವಾಳ ಗ್ರಾಮಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!