ಕಾರವಾರ: ಮನೆಯಿಂದ ತೆರಳಿದ್ದ ಯುವತಿ ನಾಪತ್ತೆ
ಕಾರವಾರ : ಮನೆಯಲ್ಲಿ ಯಾರಿಗೂ ಹೇಳದೇ ಹೊರ ಹೋದ ಯುವತಿಯೋರ್ವಳು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾದ ಘಟನೆ ಕಾರವಾರ ಸೀಬರ್ಡ್ ಕಾಲೋನಿ, ಚಿತ್ತಾಕುಲ ಎಂಬಲ್ಲಿ ನಡೆದಿದೆ.
ಸೀಬರ್ಡ್ ಕಾಲೋನಿ, ಚಿತ್ತಾಕುಲ ನಿವಾಸಿ ಸುನೀತಾ ಕಿರಣ ಲಮಾಣಿ (20) ಕಾಣೆಯಾದ ಯುವತಿ.
10 ಎಪ್ರಿಲ್ 2024 ರಂದು ಬೆಳಿಗ್ಗೆ 5 ಗಂಟೆಗೆ ಯಾರಿಗೂ ಹೇಳದೇ ಮನೆಯಿಂದ ಹೋದವಳು, ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾದ್ದಾಳೆ. ಮೂಲತಃ ಈಕೆ ಲಕ್ಷಮೇಶ್ವರ, ಅಕ್ಕಿಗುಂದಿ, ಗದಗ ಜಿಲ್ಲೆಯವರು. ಈಕೆಯ ಕುಟುಂಬ ಕಳೆದ ಕೆಲ ವರ್ಷಗಳಿಂದ ಸದಾಶಿವಗಡ ಚಿತ್ತಾಕುಲದಲ್ಲಿ ವಾಸವಿದ್ದಾರೆ .ಕುಟುಂಬದವರು ಚಿತ್ತಾಕುಲಾ ಠಾಣೆಗೆ ದೂರು ನೀಡಿದ್ದಾರೆ





