ಮಂಗಳೂರು: 5.64 ಕೋಟಿ ರೂ. ಮೌಲ್ಯದ ಮದ್ಯ, 15.5 ಕೆಜಿ ಡ್ರಗ್ಸ್ ವಶಕ್ಕೆ
ಮಂಗಳೂರು: ಜಿಲ್ಲೆಯಲ್ಲಿ 5,64,80,734 . ರೂ. ಮೌಲ್ಯದ 1,42,160 ಲೀ. ಮದ್ಯ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದುವರೆಗೆ ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ 816 ಎಫ್‌ಐಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





