BJP ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಆಸ್ತಿ ಮೊತ್ತ ಎಷ್ಟು ಕೋಟಿ ರೂ. ಗೊತ್ತೇ?
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯ ಮೇರು ನಾಯಕ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿರುವ ಅವರು ಪತಿ-ಪತ್ನಿ ಸೇರಿ ಒಟ್ಟು 33.5 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ತಮ್ಮ ಬಳಿ ಯಾವುದೇ ವಾಹನಗಳಿಲ್ಲ, ಯಾವುದೇ ಪ್ರಕರಣಗಳೂ ಇಲ್ಲ ಎಂದು ಅಫಿಡವಿಟ್‌ನಲ್ಲಿ ಅವರು ವಿವರ ನೀಡಿದ್ದಾರೆ.




