May 6, 2026

RSS ಮುಖಂಡನಿಗೆ ಹಲ್ಲೆ

0
image_editor_output_image-518828414-1712987892357.jpg

ಹಾಸನ: ಹಾಸನದಲ್ಲಿ ಆರ್‌ಎಸ್‌ಎಸ್‌ ಮುಖಂಡ ಐನೆಟ್ ವಿಜಯ್‌ಕುಮಾರ್ ಮತ್ತು ಸ್ನೇಹಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ದಾಳಿ ನಡೆಸಿದೆ.

ವಿಜಯ್‌ಕುಮಾರ್ ಎಂದಿನಂತೆ ತನ್ನ ಕಚೇರಿಯಲ್ಲಿದ್ದಾಗ ಏಕಾಏಕಿ ಅಂಗಡಿಗೆ ನುಗ್ಗಿರುವ 50ಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಗಲಾಟೆ ಮಾಡಿ ಕಚೇರಿಯ ಗಾಜು ಮತ್ತು ಕೆಲವು ಕಂಪ್ಯೂಟರ್ ಉಪಕರಣಗಳನ್ನು ಪುಡಿ ಪುಡಿ ಮಾಡಿದೆ. ಇದೇ ಸಂದರ್ಭ ಕಚೇರಿಯ ಒಳಗೆ ಕುಳಿತಿದ್ದ ವಿಜಯ್ ಕುಮಾರ್ ಮೇಲೂ ಹಲ್ಲೆ ಮಾಡಿದೆ. ಪ್ರೀತಂಗೌಡನ ಬಗ್ಗೆ ಮಾತನಾಡುತ್ತೀಯಾ? ಎಷ್ಟೋ ಧೈರ್ಯ ನಿನಗೆ ಎಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ತಕ್ಷಣ ವಿಜಯ್ ಕುಮಾರ್ ಸ್ನೇಹಿತರು ಆಗಮಿಸಿ ಹಲ್ಲೆ ಬಿಡಿಸಲು ಮುಂದಾದಾಗ ಅವರುಗಳ ಮೇಲೆಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!