ಬೆಳ್ಳಾರೆ:ಭೀಕರ ಬೈಕ್ ಅಪಘಾತ: ಬಾಲಕ ಮಹಮ್ಮದ್ ರಾಝಿಕ್ ಮೃತ್ಯು
ಬೆಳ್ಳಾರೆ :- ಪೆರುವಾಜೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಬೆಳ್ಳಾರೆ ಸಮೀಪದ ಉಮಿಕ್ಕಳ ನಿವಾಸಿ ರಝಾಕ್ ಅವರ ಮಗ ಮಹಮ್ಮದ್ ರಾಝಿಕ್ (16) ಎಂಬ ಬಾಲಕ ಮೃತಪಟ್ಟ ಘಟನೆ ಎ,11 ರಂದು ನಡೆದಿದೆ. ಮತ್ತೋರ್ವ ಯುವಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ತಿಳಿದುಬಂದಿದೆ.
ಕುಂಡಡ್ಕದಿಂದ ಬೆಳ್ಳಾರೆ ಹೋಗಿ ತರಕಾರಿ ಹಣ್ಣು ಹಂಪಲು ಖರೀದಿ ಮಾಡಿ ಮತ್ತೆ ಕುಂಡಡ್ಕಕ್ಕೆ ತಿರುಗಿ ಬರುತ್ತಿದ್ದ ಸಂದರ್ಭ ಹಠಾತ್ತಾಗಿ ಕಾಡುಹಂದಿಗಳ ಗುಂಪೊಂದು ರಸ್ತೆ ದಾಟಿದ್ದು ಇದನ್ನು ಕಂಡ ಸವಾರ ಬ್ರೇಕ್ ಹಾಕಿದ ಸಂದರ್ಭ ರಸ್ತೆ ಬದಿಯಲ್ಲಿದ್ದ ಮರಕ್ಕೆ ಆಕ್ಟೀವಾ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರನ ತಲೆ ಮರಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದರು.
ಅದೇ ರಸ್ತೆಯಲ್ಲಿ ಬರುತ್ತಿದ್ದ ಯುವಕರು ತಕ್ಷಣ ಆಸ್ಪತ್ರೆಗೆ ಕರೆ ತಂದರಾದರು ದರ್ಬೆ ತಲುಪುವ ಹೊತ್ತಿಗೆ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ತಿಳಿದು ಬಂದಿದೆ.
ಯುವಕನು ಉಮಿಕ್ಕಳ ಟಿಂಬರ್ ರಝಾಕ್ ಅವರ ಮಗನಾಗಿದ್ದು ಮಯ್ಯತ್ ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದು ಆಸ್ಪತ್ರೆಯ ಬಳಿ ನೂರಾರು ಸಾರ್ವಜನಿಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.






