ವಿಟ್ಲ: ಹೊರೈಝನ್ ಶಾಲೆ ರಕ್ಷಕ- ಶಿಕ್ಷಕ ಸಭೆ
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ರಕ್ಷಕ- ಶಿಕ್ಷಕ ಸಭೆಯು ಶಾಲಾ ಅಧ್ಯಕ್ಷ ಝುಬೈರ್ ಮಾಸ್ಟರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದರ್ ಉಮರ್ ಸಅದಿ ದುವಾದ ಮೂಲಕ ಸಭೆಗೆ ಚಾಲನೆ ನೀಡಿದರು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಸ್ತಾವನೆ ಮಾಡಿದರು.
ಕಾರ್ಯದರ್ಶಿ ನೋಟರಿ ಅಬೂಬಕರ್ ,ಟ್ರಸ್ಟ್ ಗಳಾದ ಅಝೀಝ್ ಸನ,ಇಸಾಕ್ ಸಾಹೇಬ್, ಇಕ್ಬಾಲ್ ಹಳೆಮನೆ,ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು, ಜತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು
ಶಿಕ್ಷಕಿಯರಾದ ವಿದ್ಯಾ ಸ್ವಾಗತಿಸಿದರು. ಫರ್ಝಾನ ವಂದಿಸಿದರು. ರಮೀಝಾ ನಿರೂಪಿಸಿದರು.






