ವಿಟ್ಲ: ಏಪ್ರಿಲ್ 8(ಇಂದು) ಡಿ’ ಗ್ರೂಪ್ ವತಿಯಿಂದ ಬೃಹತ್ ಇಫ್ತಾರ್ ಕೂಟ ಹಾಗೂ ಈದ್ ಸಂದೇಶ.
ಡಿ” ಗ್ರೂಪ್ (ರಿ) ವಿಟ್ಲ ಇದರ ವತಿಯಿಂದ ಎಪ್ರಿಲ್ 8 ರ ಸೋಮವಾರ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಇಫ್ತಾರ್ ಕೂಟ ಹಾಗೂ ಈದ್ ಸಂದೇಶ ಕಾರ್ಯಕ್ರಮ ನಡೆಯಲಿದೆ .
ಡಿ’ ಗ್ರೂಪ್ ನ ಅಧ್ಯಕ್ಷ ವಿ.ಎಚ್.ರಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಈದ್ ಸಂದೇಶ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಹೋಪ್ ಫೌಂಡೇಶನ್ ಇಂಡಿಯಾ ಇದರ ಸ್ಥಾಪಕಾಧ್ಯಕ್ಷರಾದ ಸೈಫ್ ಸುಲ್ತಾನ್ ಸೈಯಿದ್ ಭಾವಹಿಸಲಿರುವ ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು,, ಡಿ’ ಗ್ರೂಪ್ ನ ಗೌರವಾಧ್ಯಕ್ಷ ಅಝೀಝ್ ಸನ, ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮುಂತಾದವರು ಉಪಸ್ಥಿತರಿರುವರು.






