ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ 1.26 ಕೋಟಿ ರೂ. ಸಾಲಗಾರ!

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಸ್ಥಿರ ಮತ್ತು ಚರಾಸ್ತಿಯ ಮೌಲ್ಯದ 75% ದಷ್ಟು ಸಾಲವನ್ನು ಹೊಂದಿರುವುದಾಗಿ ಪದ್ಮರಾಜ್ ರಾಮಯ್ಯ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
1,26,50,000 ಕೋಟಿ ರೂ. ಸಾಲ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ 1,26,50,000 ಕೋಟಿ ರೂ. ಸಾಲ ಹೊಂದಿದ್ದಾರೆ.
30 ಲಕ್ಷ ರೂ. ಮೌಲ್ಯದ ಕಾರು ಲೋನ್ ಸೇರಿ ಇತರೆ ಸಾಲಗಳ ಮೌಲ್ಯ ಕೋಟಿ ರೂ. ಇದೆ. ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 1,48,01,445 ಕೋಟಿ ರೂ. ಆದರೆ ಅವರ ಆಸ್ತಿ ಮೌಲ್ಯದ ಅರ್ಧದಷ್ಟು ಅಂದರೆ 1,26,50,000 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.