December 19, 2025

ಪಶ್ಚಿಮ ಬಂಗಾಳ: ಸರ್ಕಾರಿ ಕಚೇರಿಯಲ್ಲಿ ಟಿಎಂಸಿ ನಾಯಕಿ ಪಿಸ್ತೂಲ್ ಹಿಡಿದು ಫೋಟೋ: ಭಾರೀ ವಿವಾದ

0
n3394738541638902586958a6bbea9c5fcdc2d1fd91c1698eab473571b629b38d60a436ad58e22cedda69ed.jpg

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸರ್ಕಾರಿ ಕಚೇರಿಯಲ್ಲಿ ಟಿಎಂಸಿ ನಾಯಕಿಯೊಬ್ಬರು ಪಿಸ್ತೂಲ್ ಹಿಡಿದು ಮೊಬೈಲ್ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಫೋಟೋ ಬಂಗಾಳದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಓಲ್ಡ್ ಮಾಲ್ಡಾ ಪಂಚಾಯತ್ ಸಮಿತಿಯ ಅಧ್ಯಕ್ಷೆ ಮೃಣಾಲಿನಿ ಮೊಂಡಲ್ ಮೇಟಿ ತನ್ನ ಆಫೀಸಿನ ಕುರ್ಚಿಯ ಮೇಲೆ ಕುಳಿತು, ಕೈಯಲ್ಲಿ ಗನ್ ಹಿಡಿದುಕೊಂಡು ಸೆಲ್ಫೀಗೆ ಪೋಸ್ ನೀಡುತ್ತಿರುವ ಫೋಟೋವನ್ನು ಬೇರೆಯವರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೃಣಾಲಿನಿ ಮೇಟಿ ಟಿಎಂಸಿ ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆಯೂ ಆಗಿದ್ದಾರೆ.

ಈ ಹಿನ್ನೆಲೆಯಲ್ಲಿ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಆಡಳಿತ ಪಕ್ಷವು ರಾಜ್ಯವನ್ನು ಸ್ಫೋಟಕಗಳ ಡಂಪ್ ಯಾರ್ಡ್ ಆಗಿ ಮಾಡಿಕೊಂಡಿದೆ ಎಂದು ಆರೋಪಿಸಿದೆ. ಆಕೆಯ ಮನೆಯನ್ನು ಹುಡುಕಿದರೆ ಪೊಲೀಸರಿಗೆ ಬಾಂಬ್, ರೈಫಲ್ ಕೂಡ ಸಿಗುತ್ತದೆ. ಇದು ಟಿಎಂಸಿ ಸಂಸ್ಕೃತಿ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪೊಲೀಸರು ಏನನ್ನೂ ಮಾಡುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋವಿಂದ ಚಂದ್ರ ಮೊಂಡಲ್ ಆರೋಪಿಸಿದ್ದಾರೆ.

ಆದರೆ, ಪೊಲೀಸರು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಟಿಎಂಸಿ ಹೇಳಿದೆ. ಸರ್ಕಾರಿ ಕಚೇರಿಯ ಅಫಿಷಿಯಲ್ ಕುರ್ಚಿಯ ಮೇಲೆ ಕುಳಿತುಕೊಂಡು ಬಂದೂಕನ್ನು ಹಿಡಿದು ಅದರೊಂದಿಗೆ ಆಟವಾಡುವುದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಇದು ನಿಜವಾದ ಪಿಸ್ತೂಲಾ? ಅಥವಾ ಆಟಿಕೆ ಪಿಸ್ತೂಲಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅದು ನಿಜವಾದ ಗನ್ ಆಗಿದ್ದು, ಆಕೆಯ ವರ್ತನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಂದು ನಾರಾಯಣ ಚೌಧರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!