December 19, 2025

ಪಾವತಿ ಮೊತ್ತ ಬಾಕಿ:
ಸ್ಪೈಸ್ ಜೆಟ್ ಕಂಪನಿಯ ಆಸ್ತಿ ಜಪ್ತಿಗೆ ಮದ್ರಾಸ್ ಹೈಕೋರ್ಟ್ ಆದೇಶ

0
pjimage_3_2.jpg

ಚೆನ್ನೈ: ಭಾರಿ ಮೊತ್ತ ಬಾಕಿ ಉಳಿಸಿಕೊಂಡಿರುವ ಪ್ರಕರಣದಲ್ಲಿ ಸ್ವಿಸ್‌ ಕಂಪನಿಯ ಅರ್ಜಿಗೆ ಸಂಬಂಧಿಸಿದಂತೆ ಖಾಸಗಿ ವೈಮಾನಿಕ ಸಂಸ್ಥೆ ಸ್ಪೈಸ್‌ಜೆಟ್‌ ಅನ್ನು ಮುಚ್ಚಲು ಹಾಗೂ ಅದರ ಆಸ್ತಿಯನ್ನು ಜಪ್ತಿ ಮಾಡಲು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಸ್ಪೈಸ್‌ಜೆಟ್ 2011 ರಲ್ಲಿ SR ಟೆಕ್ನಿಕ್ಸ್ ಲಿಮಿಟೆಡ್‌ನೊಂದಿಗೆ ವಿಮಾನದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಗೆ ಒಪ್ಪಂದ ಮಾಡಿಕೊಂಡಿತ್ತು. 2012 ರಲ್ಲಿ, ಹಣಕಾಸು ಕಂಪನಿ ಕ್ರೆಡಿಟ್ ಸ್ಯೂಸ್ ಎಜಿ ಎಸ್‌ಆರ್ ಟೆಕ್ನಿಕ್ಸ್‌ನೊಂದಿಗೆ ಹಣಕಾಸು ಒಪ್ಪಂದಕ್ಕೆ ಸಹಿ ಹಾಕಿತ್ತು, ಅದರ ಅಡಿಯಲ್ಲಿ ಕ್ರೆಡಿಟ್ ಸ್ಯೂಸ್ಗೆ ಪಾವತಿಗಳನ್ನು ಸ್ವೀಕರಿಸುವ ಹಕ್ಕುಗಳನ್ನು ನೀಡಲಾಯಿತು. ಬ್ಯಾಂಕಿಂಗ್ ಸಂಸ್ಥೆಯು ಕಾಲಾನಂತರದಲ್ಲಿ ಸ್ಪೈಸ್‌ಜೆಟ್‌ಗೆ ಪಾವತಿಯನ್ನು ಕೇಳುವ ತುಂಬಾ ನೋಟಿಸ್‌ಗಳನ್ನು ನೀಡಿತ್ತು.

ಈ ಮಧ್ಯೆ ವೈಮಾನಿಕ ಸಂಸ್ಥೆಯು, ‘ಐದು ಮಿಲಿಯನ್‌ ಡಾಲರ್‌ಗೆ ಸರಿಸಮಾನವಾದ ಮೊತ್ತವನ್ನು (ಸುಮಾರು ₹ 37.72 ಕೋಟಿ) ಎರಡು ವಾರದಲ್ಲಿ ಠೇವಣಿ ಇಡಬೇಕು ಎಂಬ ಷರತ್ತು ವಿಧಿಸಿ ಕೋರ್ಟ್‌, ಮೂರು ವಾರದ ಅವಧಿಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ’ ಎಂದು ತಿಳಿಸಿದೆ. ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಸೂಕ್ತ ಪರಿಹಾರ ಕ್ರಮಗಳನ್ನು ಸಂಸ್ಥೆಯು ಕೈಗೊಳ್ಳಲಿದೆ ಎಂದು ತಿಳಿಸಿದೆ.

ಕಂಪನಿ ಕಾಯ್ದೆ 1956 ಅನ್ವಯ ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಆಸ್ತಿ ಜಪ್ತಿ ಪ್ರಕ್ರಿಯೆ ಜಾರಿಗೊಳಿಸಲು ಅಧಿಕೃತವಾಗಿ ಬರಖಾಸ್ತುದಾರರನ್ನು ನೇಮಿಸಬೇಕು ಎಂದು ಕೋರಿ ಸ್ವಿಟ್ಜರ್‌ಲೆಂಡ್‌ ಕಾಯ್ದೆಯಡಿ ನೋಂದಣಿಯಾಗಿರುವ ಕ್ರೆಡಿಟ್‌ ಸ್ಯೂಸ್‌ ಎ.ಜಿ ಸಂಸ್ಥೆಯು ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರ ಪೀಠವು ಕಂಪನಿಗಳ ಕಾಯಿದೆಯ ಸೆಕ್ಷನ್ 433 ರ ವರ್ಗ (ಇ) ಕಂಪನಿಯು ತನ್ನ ಸಾಲವನ್ನು ಪಾವತಿಸಲು ಸಾಧ್ಯವಾಗದಿದ್ದರೆ ಕಂಪನಿಯನ್ನು ಮುಚ್ಚಬಹುದು ಎಂದು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!