ವಿಟ್ಲ: ಮಾರಕಾಯುಧಗಳಿಂದ ಹಲ್ಲೆ ಪ್ರಕರಣ: ದೂರು-ಪ್ರತಿದೂರು ದಾಖಲು: ಗಣೇಶ್ ಮತ್ತು ಮಹಮ್ಮದಾಲಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

ವಿಟ್ಲ: ಕೇಪು ಗ್ರಾಮದ ಅಡ್ಯನಡ್ಕ ಸಮೀಪದ ನಡೆದ ಘರ್ಷಣೆಗೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಅಡ್ಯನಡ್ಕ ನಿವಾಸಿ ಮಹಮ್ಮದ್ ಅಲಿ ಎ (36)ಎಂಬವರ ದೂರಿನಂತೆ ಮಧ್ಯಾಹ್ನ ತನ್ನ ಮನೆಯಲ್ಲಿರುವ ಸಮಯ, ಆರೋಪಿ ಗಣೇಶ್ ಎಂಬಾತನು ಮನೆಯ ಬಳಿಗೆ ಬಂದು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು, ಅವ್ಯಾಚವಾಗಿ ಬೈದು, ತಾನು ತಂದಿದ್ದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಸ್ಥಳೀಯರು ಬರುವುದನ್ನು ಕಂಡು ಆರೋಪಿಯು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಅಲಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದೆ.
ಎಣ್ಮಕಜೆ ಗ್ರಾಮ ಮಂಜೇಶ್ವರ ತಾಲೂಕು ಕಾಸರಗೋಡು ನಿವಾಸಿ ಗಣೇಶ್ (29) ರವರು ಆರೋಪಿ ಮಹಮ್ಮದ್ ಅಲಿ ರವರ ವಿರುದ್ದ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ಪ್ರತಿದೂರಿನಂತೆ, ವಿಟ್ಲ ಪೊಲೀಸ್ ಠಾಣೆ ಅ.ಕ್ರ 60/2024 ಕಲಂ: 341,504, 307,324,506 IPC ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣ ತನಿಖೆ ನಡೆಸಲಾಗುತ್ತಿದೆ.