May 6, 2026

ವರದಕ್ಷಿಣೆ ನೀಡದ ಕಾರಣಕ್ಕಾಗಿ ಯುವತಿಯನ್ನು ಕೊಲೆ‌ಮಾಡಿದ ಪತಿ

0
image_editor_output_image1016343753-1712101009387.jpg

ದಿಲ್ಲಿ: ವರದಕ್ಷಿಣೆ ನೀಡದ ಕಾರಣಕ್ಕಾಗಿ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ಆಕೆಯ ಪತಿ ಮತ್ತು ಕುಟುಂಬವು ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಲಾದ ದಾರುಣ ಘಟನೆ ನಡೆದಿದೆ.

ಟೊಯೋಟಾ ಫಾರ್ಚುನ್ ಮತ್ತು 21 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೇಳಲಾಗಿತ್ತು. ಆದರೆ ಅದನ್ನು ನೀಡಿದ ಹಿನ್ನೆಲೆಯಲ್ಲಿ ಯುವತಿಯನ್ನು ಹತ್ಯೆ ಮಾಡಲಾಗಿದೆ.

ಕರಿಷ್ಮಾ ಎಂಬ ಯುವತಿ ಮೃತಪಟ್ಟಿದ್ದು ಆಕೆಯ ಅತ್ತೆ, ಪತಿ ವಿಕಾಸ್ ಮತ್ತು ಮೈದುನನ ಮೇಲೆ ಕೇಸು ದಾಖಲಾಗಿದೆ.

ಇವರೆಲ್ಲ ಸೇರಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕರಿಷ್ಮಾ ತನಗೆ ಕರೆ ಮಾಡಿ ತಿಳಿಸಿದ್ದಾಳೆ ಎಂದು ಕರಿಷ್ಮಾಳ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!