March 17, 2026

ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೊಲೆರೊ ಢಿಕ್ಕಿ: ಮೂವರು ಮೃತ್ಯು, 20 ಕುರಿಗಳು ಸಾವು

0
image_editor_output_image-88578461-1712101137882.jpg

ಹಾವೇರಿ: ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಕುರಿ ತುಂಬಿದ್ದ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ವ್ಯಕ್ತಿಗಳು ಸೇರಿದಂತೆ 20 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ನಡೆದಿದೆ.

ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗುಡ್ಡಪ್ಪ ಕೈದಾಳಿ(40), ಮೈಲಾರಪ್ಪ ಕೈದಾಳಿ(41), ಶಿವರಾಜ್ ಹೊಳೆಪ್ಪನವರ(22) ಮೃತರು.

ಬೆಳಗಾವಿಯಿಂದ ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗಮಧ್ಯೆ ದುರಂತ ಸಂಭವಿಸಿದೆ. ಬೀರಪ್ಪ ದೊಡ್ಡಚಿಕ್ಕಣ್ಣನವರ, ನಿಂಗರಾಜ್ ಹಿತ್ತಲಮನಿ ಮತ್ತಯ ನಿಂಗಪ್ಪ ಕೊರಗುಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಮತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!