February 3, 2026

ಬೆಂಗಳೂರು: ಸರಣಿ ಅಪಘಾತ: ಓರ್ವ ಮೃತ್ಯು, ಹಲವರಿಗೆ ಗಾಯ

0
n3394198861638901853020ff329340acb5c4548a0cb95835af89afde2c59e2d2f8f81eb3357bcda7267bb5.jpg

ಬೆಂಗಳೂರು: ನಗರದಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕಾರು, ಎರಡು ಆಟೋ, ಮಿನಿ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

ಮೃತನನ್ನು ಅಸ್ಸಾಂ ಮೂಲದ ಹರಿತಾಪ ಎಂದು ಗುರುತಿಸಲಾಗಿದ್ದು, ಕಳೆದ 10 ವರ್ಷದಿಂದ ಸ್ಥಳೀಯ ಪಬ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು, ಬೆಂಜ್ ಕಾರಿನ ಚಾಲಕ ಸುವೀದ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಇಂದಿರಾನಗರದ 12 -13ನೇ ಮುಖ್ಯರಸ್ತೆ ಮಧ್ಯೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಬೆಂಜ್ ಕಾರು 7ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಜನನಿಬಿಡ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ಸಾರ್ವಜನಿಕರು ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.

ನಂದಿತಾ ಚೌಂದ್ರಿ ಎಂಬುವವರಿಗೆ ಸೇರಿದ್ದ ಬೆನ್ಜ್ ಕಾರಿನಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬೆನ್ಜ್ ಕಾರಿನ ಚಾಲಕನ ಅತಿ ವೇಗದಿಂದಲೇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಸ್ಥಳಕ್ಕೆ ಇಂದಿರಾನಗರ ಪೊಲೀಸರು ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!