April 6, 2025

ತಮಿಳು ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

0

ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.

ನಟನಿಗೆ ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

 

 

48ನೇ ವಯಸ್ಸಿನಲ್ಲೇ ಈ ಪ್ರತಿಭಾವಂತ ನಟ ನಿಧನರಾಗಿರುವುದು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ಕಂಗೆಡಿಸಿದೆ. ಬಾಲಾಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಂದೇಶಗಳು ಹರಿದಾಡುತ್ತಿವೆ.

ಕಮಲಹಾಸನ್ ಅವರ ‘ಮರುದುನಾಯಗಂ’ ಚಿತ್ರದಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ ಬಾಲಾಜಿ, ರಾಧಿಕಾ ಶರತ್‍ ಕುಮಾರ್ ಅವರ ‘ಚಿಟ್ಟಿ’ ಮೂಲಕ ಟೆಲಿವಿಷನ್ ವಿಭಾಗಕ್ಕೆ ವಲಸೆ ಹೋದರು. ಅಲ್ಲಿ ಅವರು ನಿರ್ವಹಿಸಿದ ಡೇನಿಯಲ್ ಪಾತ್ರದಿಂದಾಗಿ ಬೆಳ್ಳಿಪರದೆಯಲ್ಲಿ ಡೇನಿಯಲ್ ಬಾಲಾಜಿ ಎಂದೇ ಪ್ರಸಿದ್ಧರಾದರು.

ತಮಿಳು ಚಿತ್ರಗಳ ಹೊರತಾಗಿ ಅವರು, ಹಲವು ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು. ‘ಅರಿಯವನ್’ ಅವರ ಕೊನೆಯ ಚಿತ್ರ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್‌ ಆಗಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ಡೇನಿಯಲ್‌ ಬಾಲಾಜಿ ಬಹು ಭಾಷಾನಟನಾಗಿಯೂ ಗುರುತಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!