August 13, 2026

ಉಚ್ಚಾಯಿ ರಥೋತ್ಸವ ವೇಳೆ ಅವಘಡ‌: ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಾವು

0
image_editor_output_image536384623-1711755761195.jpg

ಕಲಬುರಗಿ: ನಗರದಲ್ಲಿ ಆರಂಭವಾದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವಘಡ‌ ಒಂದು ಸಂಭವಿಸಿದೆ.

ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ರಾಮು ಸಿದ್ದಪ್ಪ (28) ಮೃತ ಹೋಂಗಾರ್ಡ್. ಮೃತ ರಾಮು ಮೂಲತಃ ಬೀದರ್ ಜಿಲ್ಲೆಯ ಇಟಗಾ ಗ್ರಾಮದವರು.

ಮತ್ತೋರ್ವ ಸಿಬ್ಬಂದಿ ಅಶೋಕರೆಡ್ಡಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಥ ಎಳೆಯುವ ವೇಳೆ ಉಂಟಾದ ಗದ್ದಲದಲ್ಲಿ ಭಕ್ತರನ್ನ ನಿಯಂತ್ರಿಸುವ ವೇಳೆ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!