ಕಡಬ: ವ್ಯಕ್ತಿಯೋರ್ವರು ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಕಡಬದ ಕೋಡಿಂಬಾಳದಲ್ಲಿ ನಡೆದಿದೆ.
ಮೃತಪಟ್ಟವರನ್ನು ಆಟೋ ಚಾಲಕ ರೆಜಿ ವರ್ಗೀಸ್ (39) ಎಂದು ಗುರುತಿಸಲಾಗಿದೆ.
ಕೋಡಿಂಬಾಳದ ನಾಕೂರು ఎంబల్లి ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೆಜಿ ವರ್ಗೀಸ್ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
