November 21, 2024

ಸನ್‌ರೈಸರ್ಸ್‌ ಹೈದರಾಬಾದ್‌ ಅಬ್ಬರದ ಬ್ಯಾಟಿಂಗ್: RCB ಸರ್ವಕಾಲಿಕ‌ ದಾಖಲೆ ಉಡೀಸ್

0

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಅಮೋಘ ದಾಖಲೆ ನಿರ್ಮಿಸಿದೆ.

ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ತಂಡ ಎಂಬ ನೂತನ ದಾಖಲೆ ನಿರ್ಮಿಸಿದ ಆ ಮೂಲಕ ಆರ್‌ಸಿಬಿ ತಂಡದ ಹೆಸರಲ್ಲಿದ್ದ ವಿಶೇಷ ದಾಖಲೆಯನ್ನು ಎಸ್‌ಆರ್‌ಎಚ್‌ ಅಳಿಸಿ ಹಾಕಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌ ಸ್ಫೋಟಕ ಆಟವಾಡಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ ಹಾಗೂ ಹೆನ್ರಿಚ್‌ ಕ್ಲಾಸೆನ್‌ ಅರ್ಧಶತಕದ ನೆರವಿಂದ ಕೇವಲ 3 ವಿಕೆಟ್‌ ಕಳೆದುಕೊಂಡು 277 ರನ್‌ ಸಿಡಿಸಿತು. ಇದು ಐಪಿಎಲ್‌ ಇತಿಹಾಸದಲ್ಲೇ ತಂಡವೊಂದರ ಅತ್ಯಧೀಕ ಮೊತ್ತವಾಗಿದೆ.

ಈ ಹಿಂದೆ ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ ಅಧಿಕ ರನ್‌ ಗಳಿಸಿದ ದಾಖಲೆ ಆರ್‌ಸಿಬಿ ಹೆಸರಲ್ಲಿತ್ತು. 2013ರ ಐಪಿಎಲ್‌ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ ಕಳೆದುಕೊಂಡು 263 ರನ್‌ ಗಳಿಸಿತ್ತು. ಇದು ಈವರೆಗೂ ಐಪಿಎಲ್‌ನ ಅತ್ಯಧಿಕ ಮೊತ್ತವಾಗಿತ್ತು. ಆದರೆ, 11 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾಡಿದ್ದ ದಾಖಲೆ ಮುರಿದಿದೆ. ಈ ದಾಖಲೆ ಇದೀಗ ಸನ್‌ರೈಸರ್ಸ್‌ ಹೆಸರಿಗೆ ದಾಖಲಾಗಿದೆ.

ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ
277/3 – ಎಸ್‌ಆರ್‌ಎಚ್‌ (ಮುಂಬೈ ಇಂಡಿಯನ್ಸ್‌ ವಿರುದ್ಧ) ಹೈದರಾಬಾದ್, 2024
263/5 – ಆರ್‌ಸಿಬಿ (ಪುಣೆ ವಾರಿಯರ್ಸ್‌ ವಿರುದ್ಧ) ಬೆಂಗಳೂರು, 2013
257/5 – ಎಲ್‌ಎಸ್‌ಜಿ (ಪಂಜಾಬ್‌ ಕಿಂಗ್ಸ್‌ ವಿರುದ್ಧ) ಮೊಹಾಲಿ, 2023
248/3 – ಆರ್‌ಸಿಬಿ (ಗುಜರಾತ್‌ ಲಯನ್ಸ್‌ ವಿರುದ್ಧ) ಬೆಂಗಳೂರು, 2016
246/5 – ಸಿಎಸ್‌ಕೆ (ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ) ಚೆನ್ನೈ, 2010
ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಡ್‌, ಆರಂಭದಿಂದಲೇ ಸ್ಫೋಟಕ ಆಟವಾಡಿದರು. ಆ ಮೂಲಕ ವೇಗವಾಗಿ ಅರ್ಧಶತಕ ಸಿಡಿಸಿದರು. ಎಸ್‌ಆರ್‌ಎಚ್‌ ಪರ ಮೊದಲ ಪಂದ್ಯವಾಡಿದ ಅವರು, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್‌ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಇದೇ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 16 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಹೆಡ್‌ ದಾಖಲೆ ಮುರಿದರು.

Leave a Reply

Your email address will not be published. Required fields are marked *

error: Content is protected !!