ಪೊಲೀಸರ ಕೈಕಚ್ಚಿ ಹಲ್ಲೆ: ಆರೋಪಿಯ ಬಂಧನ
ನೆಲಮಂಗಲ: ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿಯನ್ನ ಹಿಡಿಯಲು ಯತ್ನಿಸಿದಾಗ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಡೆದಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪದಡಿ ಪತಿ ನವೀನ್ ಕುಮಾರ್ (30) ಎಂಬಾತನನ್ನು ಬಂಧಿಸಲಾಗಿದೆ. ಪತ್ನಿ ರಶ್ಮಿ ಮೇಲೆ ಪತಿ ನವೀನ್ ಕುಮಾರ್ ಕ್ಷುಲ್ಲಕ ಕಾರಣಕ್ಕಾಗಿ ಕಾರಿನ ಗ್ಲಾಸ್ ಹೊಡೆದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ರಶ್ಮಿ 112ಗೆ ತುರ್ತು ಕರೆ ಮಾಡಿದ್ದಾರೆ.
ಕರೆ ಆಧರಿಸಿ 112 ಇಆರ್ಎಸ್ಎಸ್ ಮಹಾಂತೇಶ್ ಗುಣಕಿ ಹಾಗೂ ಚಂದ್ರು ಎಂಬುವವರು ಬಂದಿದ್ದಾರೆ. ಅವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಸದ್ಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.





