September 25, 2026

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜ್ ನಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮ

0
image_editor_output_image1851291987-1711269972404

ವಿಟ್ಲ: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇಫ್ತಾರ್ -2024 ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಸಈದ್ ಇಸ್ಮಾಯಿಲ್ ಅವರು ಉಪವಾಸದ ಮಹತ್ವ ಮತ್ತು ಕುರ್‌ಆನ್‌ನ ಸಂದೇಶವನ್ನು ನೀಡಿದರು.

ಪ್ರಾಂಶುಪಾಲೆ ಹೇಮಲತ ಬಿ. ಡಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಯಾಸೀನ್ ಬೇಗ್ ಅಧ್ಯಕ್ಷತೆ ವಹಿಸಿದ್ದರು.

 

ವೇದಿಕೆಯಲ್ಲಿ ಕಲ್ಲಡ್ಕ ಮ್ಯೂಸಿಯಂ ನ ಸ್ಥಾಪಕರಾದ ಯಾಸೀರ್ ಕಲ್ಲಡ್ಕ, ಕಾಲೇಜ್ ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಇಮಾರತ್ ಅಲಿ, ಸಂಚಾಲಕರಾದ ಅಮಾನುಲ್ಲಾ ಖಾನ್, ಖಜಾಂಜಿ ಹೈದರ್ ಅಲಿ ನೀರ್ಕಜೆ, , ಸದಸ್ಯರಾದ ಅಬ್ದುಲ್ಲಾ ಕುಂಞ, ಮತ್ತು ಕಾಲೇಜ್ ನ ಸಲಹಾ ಸಮಿತಿಯ ಕಾರ್ಯದರ್ಶಿಯಾದ ಮಮಿತಾ ಎಸ್ ರೈ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕುಮಾರಿ ನಿಹ್ಲಾ ಹೈದರ್ ಖಿರಾಅತ್ ಪಠಿಸಿದರು, ಕಾಲೇಜ್‌ನ ಗ್ರಂಥಪಾಲಕಿ ಪ್ರಜ್ಞಾ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಇಫ್ತಾರ್‌ನ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!