ಕಡೂರು: ಬೈಕ್‍ಗೆ ಲಾರಿ ಢಿಕ್ಕಿ, ಮಹಿಳೆ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ಲಾರಿ ಚಾಲಕ ಒನ್ ವೇನಲ್ಲಿ ಬಂದ ಪರಿಣಾಮ ಬೈಕ್‍ಗೆ ಡಿಕ್ಕಿಯಾಗಿ, ಮಹಿಳೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ. ಮಹಿಳೆಯ ಪತಿ ದಾವಣಗೆರೆ ಎಎಸ್‍ಪಿ ಗನ್‍ಮ್ಯಾನ್ ಜಯಣ್ಣ ಸ್ಥಿತಿ ಗಂಭೀರವಾಗಿದೆ.
ಸುಮಾ (25) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ, ಪತ್ನಿ ಜೊತೆ ಬೈಕಿನಲ್ಲಿ ಹೋಗುವಾಗ ಈ ಅಪಘಾತ ನಡೆದಿದೆ. ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ





