February 4, 2026

ಎಂ.ಫ್ರೆಂಡ್ಸ್ ವತಿಯಿಂದ ಮಂಕುಡೆ ಲೋಕಿಮೂಲೆ ಮಸೀದಿಯಲ್ಲಿ ಇಫ್ತಾರ್ ಕೂಟ

0
image_editor_output_image1408292310-1711270417733

ವಿಟ್ಲ: ಮಂಗಳೂರಿನ ಪ್ರತಿಷ್ಠಿತ ಎಂ.ಫ್ರೆಂಡ್ಸ್ ವತಿಯಿಂದ ವಿಟ್ಲ ಸಮೀಪದ ಮಂಕುಡೆ ಲೋಕಿಮೂಲೆ ಸಿರಾಜುಲ್ ಹುದಾ ಮದರಸ ಹಾಗೂ ಮಸೀದಿ ವಠಾರದಲ್ಲಿ ಇಫ್ತಾರ್ ಕೂಟವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ರವರ ಆಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅರ್ಹ ಕುಟುಂಬಗಳಿಗೆ ರಮ್ಝಾನ್ ಕಿಟ್ ಹಾಗೂ ಮಹಿಳೆಯರಿಗೆ ನಮಾಝ್ ಉಡುಪು (ಕಮೀಸ್) ಹಾಗೂ ಕುರ್‌ಆನ್ ವಿತರಿಸಲಾಯಿತು.

ಉಮರ್ ದಾರಿಮಿ ಪರ್ತಿಪ್ಪಾಡಿ ದುವಾ ನೆರವೇರಿಸಿದರು. ಹಕೀಂ ಫೈಝಿ ಸಂದೇಶ ಬಾ಼ಷಣ ಮಾಡಿದರು.
ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಪ್ರಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಸುಝಾಹ್ ಮಹಮ್ಮದ್ ಸಂದರ್ಭೋಚಿತವಾಗಿ ಮಾತನಾಡಿದರು.
ಕೋಶಾಧಿಕಾರಿ ನೋಟರಿ ಅಬೂಬಕರ್, ಟ್ರಸ್ಟಿಗಳಾದ ಇಸಾಕ್ ಎಡ್ವಕೇಟ್, ಹನೀಫ್ ಕುದ್ದುಪದವು, ನೌಶೀನ್ ಬದ್ರಿಯಾ, ಅನ್ಸಾರ್ ಬೆಳ್ಳಾರೆ, ಪರ್ತಿಪ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ,‌ಶಾಕಿರ್ ಅಳಕೆಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಇಸ್ಮಾಯಿಲ್ ಹಾಜಿ ಅಡ್ಡದಬೀದಿ, ರಶೀದ್ ಡಿ.ಎಂ.,ಲೋಕಿಮೂಲೆ ಮದರಸ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ, ಕಾರ್ಯದರ್ಶಿ ಮಹಮ್ಮದ್ ಮಾಸ್ಟರ್, ಸಾಲೆತ್ತೂರು ರೇಂಜ್ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಮಹಮ್ಮದ್ ರಾಧುಕಟ್ಟೆ,ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ‌ ಮುಂತಾದವರು ಉಪಸ್ಥಿತರಿದ್ದರು.
ಖಲಂದರ್ ಪರ್ತಿಪ್ಪಾಡಿ ಸ್ವಾಗತಿಸಿ ನಿರೂಪಿಸಿದರು.
ಪತ್ರಕರ್ತ ಆರಿಫ್ ಪಡುಬಿದ್ರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!