December 19, 2025

15 ವರ್ಷಗಳ ಬಳಿಕ ಡೇವಿಸ್‌ ಕಪ್‌ ಟೆನಿಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ರಶ್ಯ

0
image_editor_output_image249334329-1638854085844.jpg

ಸ್ಪೇನ್‌: ಡ್ಯಾನಿಲ್‌ ಮೆಡ್ವೆಡೇವ್‌ ಸಾಹಸದಿಂದ ರಶ್ಯ 15 ವರ್ಷಗಳ ಬಳಿಕ ಡೇವಿಸ್‌ ಕಪ್‌ ಟೆನಿಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕ್ರೊವೇಶಿಯಾ ವಿರುದ್ಧ ಸಾಧಿಸಿದ 2-0 ಮುನ್ನಡೆಯಿಂದ ರಶ್ಯ ಕಿರೀಟ ಏರಿಸಿಕೊಂಡಿತು.

ಮರಿನ್‌ ಸಿಲಿಕ್‌ ಎದುರಿನ ದ್ವಿತೀಯ ಪಂದ್ಯವನ್ನು ಡ್ಯಾನಿಲ್‌ ಮೆಡ್ವೆಡೇವ್‌ 7-6 (7), 6-2 ಅಂತರದಿಂದ ಗೆದ್ದು ರಶ್ಯವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸಿದರು. ಮೊದಲ ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೇವ್‌ 6-4, 7-6 (5) ಅಂತರದಿಂದ ಬೋರ್ನ ಗೋಜೊ ಅವರನ್ನು ಮಣಿಸಿದ್ದರು.

ಇದು ರಶ್ಯಕ್ಕೆ ಒಲಿದ 3ನೇ ಡೇವಿಸ್‌ ಕಪ್‌ ಪ್ರಶಸ್ತಿ. 2002 ಹಾಗೂ 2006ರಲ್ಲಿ ಅದು ಚಾಂಪಿಯನ್‌ ಆಗಿತ್ತು. ಕ್ರೊವೇಶಿಯಾ 2005 ಮತ್ತು 2018ರಲ್ಲಿ ಕಪ್‌ ಎತ್ತಿತ್ತು.

ಕಳೆದ ತಿಂಗಳು ರಶ್ಯದ ವನಿತೆಯರು ಸ್ವಿಜರ್ಲೆಂಡ್‌ಗೆ 2-0 ಅಂತರದ ಸೋಲುಣಿಸಿ “ಬಿಲ್ಲಿ ಜೀನ್‌ ಕಿಂಗ್‌ ಕಪ್‌’ ಜಯಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!