ಬೆಂಗಳೂರಿನ ರಸೆಲ್ ಮಾರುಕಟ್ಟೆಯಲ್ಲಿ ಇಸ್ರೇಲ್ ಖರ್ಜೂರ ಖರೀದಿ ಸ್ಥಗಿತ
ಬೆಂಗಳೂರು: ಕಳೆದ 20 ವರ್ಷಗಳಲ್ಲಿ ರಾಜ್ಯಕ್ಕೆ ಪ್ರಮುಖ ಖರ್ಜೂರ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಸೆಲ್ ಮಾರುಕಟ್ಟೆಯು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ನಂತರ ಇಸ್ರೇಲ್‌ನಿಂದ ‘ಕಿಂಗ್ ಸೊಲೊಮನ್’ ಬ್ರಾಂಡ್ ಖರ್ಜೂರದ ಖರೀದಿಯನ್ನು ಸ್ಥಗಿತಗೊಳಿಸಿದೆ.
ಇಸ್ರೇಲ್ ಬದಲಿಗೆ ರಸೆಲ್ ಮಾರುಕಟ್ಟೆ ದಕ್ಷಿಣ ಆಫ್ರಿಕಾ, ಇರಾನ್, ಟ್ಯುನೀಷಿಯಾ ಮತ್ತು ಇತರ ಭಾಗಗಳಿಂದ ಖರ್ಜೂರ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಖರ್ಜೂರ ಪೂರೈಕೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ.





