ಕೈಕಾಲು ಕಟ್ಟಿಹಾಕಿ ಕಾಂಗ್ರೆಸ್ ಮುಖಂಡನಿಗೆ ಮಾರಣಾಂತಿಕ ಹಲ್ಲೆ
ಚಿಕ್ಕೋಡಿ: ಜಮೀನು ವಿಚಾರಕ್ಕೆ ನಡೆದ ಜಗಳದಲ್ಲಿ ಕಾಂಗ್ರೆಸ್ ಮುಖಂಡನನ್ನ ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.
ಬಸನಗೌಡ ಪಾಟೀಲ್ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ. ತಮ್ಮದೇ ಜಮೀನು ವಿವಾದ ಹಿನ್ನೆಲೆ ನಿನ್ನೆ ಮಧ್ಯಾಹ್ನ ಸಹೋದರರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ಸಹೋದರರು.
ಮಧ್ಯಾಹ್ನ ನಡೆದ ಜಗಳದ ಸಿಟ್ಟಿನಿಂದ ಕಳೆದ ರಾತ್ರಿ ಸುಮಾರು 20ಕ್ಕೂ ಹೆಚ್ಚು ಜನ ಸೇರಿಕೊಂಡು ದೊಣ್ಣೆ ಬಡಿಗೆಗಳೊಂದಿಗೆ ಬಸನಗೌಡ ಪಾಟೀಲ್ ಮೇಲೆ ದಾಳಿ ಮಾಡಿದ್ದಾರೆ. ಕೈ ಕಾಲುಗಳನ್ನ ಕಟ್ಟಿಹಾಕಿ ಮುಖಕ್ಕೆ ಖಾರದಪುಡಿಯ್ನ ಎರಚಿ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಸಹೋದರರು ಮತ್ತು ಸಹಚರರು. ದೊಣ್ಣೆಯಿಂದ ಹೊಡೆದಿದ್ದಲ್ಲದೇ ಚಾಕುವಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾ





