ಸೋಮಣ್ಣ ಪರ ಪ್ರಚಾರಕ್ಕೆ ಹೋಗಲ್ಲ: ಬಿಜೆಪಿ ಟಿಕೆಟ್ ವಂಚಿತ ಜೆ.ಸಿ.ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ: ನನ್ನನ್ನು ಯಡಿಯೂರಪ್ಪನವರೇ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೇಳಿದ್ದರು. ಆದರೆ, ನನ್ನ ಪರವಾಗಿ ಟಿಕೆಟ್ ಗಾಗಿ ಹೈಕಮಾಂಡ್ ನಲ್ಲಿ ದನಿಯೆತ್ತಲೇ ಇಲ್ಲ. ಅವರ ವರ್ತನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹಾಗಾಗಿ, ತುಮಕೂರು ಅಭ್ಯರ್ಥಿ ಸೋಮಣ್ಣ ಪರ ಪ್ರಚಾರಕ್ಕೆ ಹೋಗಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, “ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡಲ್ಲ. ಸ್ಪಷ್ಟವಾಗಿ ಹೇಳಿದಿನಿ, ಸೋಮಣ್ಣಗೆ ಟಿಕೆಟ್ ಕೊಟ್ರೆ ಅವರ ಪರವಾಗಿ ಪ್ರಚಾರ ಮಾಡಲ್ಲ ಅಂತ ನಿರ್ಧರಿಸಿದ್ದೇನೆ. ಅವರಿಗೆ ಮಾತ್ರವಲ್ಲ, ಹೊರಗಿನವರಿಗೆ ಯಾರಿಗೂ ಕೊಟ್ರು ನಾನು ಮಾಡ್ತಿರಲಿಲ್ಲ. ಈ ಜಿಲ್ಲೆಯಲ್ಲಿ ಯಾರಿಗೂ ಕೊಟ್ಟಿದ್ರು ನಾನು ಅವರ ಪರವಾಗಿ ಪ್ರಚಾರ ಮಾಡ್ತಿದ್ದೆ ಎಂದು ಹೇಳಿದರು.





