ಬಾಡಿಗೆಗೆ ಮನೆಯಲ್ಲಿ ಪತಿ, ಪತ್ನಿಯ ಮೃತದೇಹ ಪತ್ತೆ
ಹಾಸನ: ನಗರದ ಕೆ ಹೊಸಕೊಪ್ಪಲು ಬಡಾವಣೆಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ದಂಪತಿಗಳು, ಶವವಾಗಿ ಪತ್ತೆಯಾಗಿದ್ದಾರೆ.
ಮೂಲತಃ ಹೊಳೆನರಸೀಪುರ ತಾಲ್ಲೂಕಿನ ಮೂಲದ ದೇವರಾಜ್(45) ಹಾಗೂ ಮಂಜುಳ(35) ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜೋಡಿ, ಮೂರು ತಿಂಗಳ ಹಿಂದೆ ವಾಪಸ್ ತವರಿಗೆ ಮರಳಿದ್ದರು. ಹಾಸನದಲ್ಲೂ ಗಾರ್ಮೆಂಟ್ಸ್ನಲ್ಲೆ ಕೆಲಸ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಸಮೀಪವೇ ಮನೆ ಹುಡುಕಿ ಬಾಡಿಗೆಗೆ ಮನೆ ಪಡೆದಿದ್ದರು.





