ಪುತ್ತೂರು: ಪುತ್ತಿಲ BJP ಪಕ್ಷ ಸೇರ್ಪಡೆ ಎನ್ನುವುದು ಮಾಧ್ಯಮದ ಪ್ರಚಾರ: ಬಿಜೆಪಿ ಜಿಲ್ಲಾಧ್ಯಕ್ಣ ಸತೀಶ್ ಕುಂಪಳ
ಪುತ್ತೂರು: ಪುತ್ತಿಲ ಪಕ್ಷ ಸೇರಿರುವುದು ಮಾದ್ಯಮದ ಪ್ರಚಾರ ಎಂದು ಬಿಜೆಪಿ ಜಿಲ್ಲಾಧ್ಯಕ್ಣ ಸತೀಶ್ ಕುಂಪಳ ಮಾದ್ಯಮದ ಮೇಲೆ ಗೂಭೆ ಕೂರಿಸಿದ್ದಾರೆ.
ಶುಕ್ರವಾರ ಪುತ್ತೂರಿಗೆ ಆಗಮಿಸಿದ ಅರುಣ್ ಪುತ್ತಿಲ ಅವರಿಗೆ ಅದ್ಧೂರಿ ಸ್ವಾಗತ ನೀಡಿದ್ದಲ್ಲದೆ ಪಟಾಕಿ ಸಿಡಿಸಿ ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರು ಸಂಭ್ರಮ ಪಟ್ಟಿದ್ದರು. ಆದರೆ, ಸಂಜೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸ್ಥಳೀಯ ಪ್ರಮುಖರ ಜೊತೆ ಬಾಗಿಲು ಹಾಕಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ, ಫುಲ್ ಯೂಟರ್ನ್ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ರಾಜ್ಯಾಧ್ಯಕ್ಷರ ಮನೆಯಲ್ಲಿ ಪುತ್ತಿಲ ಜೊತೆ ಒಟ್ಟಾಗಿ ಪೋಟೋ ಕ್ಲಿಕ್ಕಿಸಿಕೊಂಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪುತ್ತೂರು ಮಂಡಲದ ಬಿಜೆಪಿ ಪ್ರಮುಖರು ಯೂ ಟರ್ನ್ ತೆಗೆದುಕೊಂಡಿದ್ದು ಯಾಕೆ ಅನ್ನೋದು ನಿಗೂಢವಾಗಿದೆ.
ಆದರೆ ಪುತ್ತಿಲ ಎಂಟ್ರಿ ಆಗುತ್ತಿದ್ದಂತೆ ಪುತ್ತೂರಿನ ಮಂಡಲಕ್ಕೆ ತಕ್ಷಣ ಅಧ್ಯಕ್ಷರನ್ನು ನೇಮಕ ಮಾಡಿ ಅನ್ನೋ ಒತ್ತಾಯವನ್ನು ಬಿಜೆಪಿ ನಾಯಕರು ಜಿಲ್ಲಾಧ್ಯಕ್ಷ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಮಾತುಕತೆ ನಡೆದಿದ್ದು, ಈ ವೇಳೆ ಮತ್ತೆ ಪುತ್ತಿಲ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡಿದೆ ಎಂದು ಹೇಳಲಾಗಿದೆ. ಒಟ್ಟಾರೆ ಪುತ್ತಿಲ ಪರಿವಾರ ಮೋದಿ ಪರಿವಾರದೊಂದಿಗೆ ವಿಲೀನ ಆಯ್ತು ಅಂತಿರುವಾಗಲೇ ಪುತ್ತೂರಿನಲ್ಲಿ ನಡೆದ ಬೆಳವಣಿಗೆ ಸದ್ಯಕ್ಕೆ ಪುತ್ತಿಲ ಪರಿವಾರದ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿದೆ





