December 19, 2025

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಗಳಿಂದ ಕಳವುಗೈದ ವಸ್ತುಗಳು ವಕ್ಕೆ: ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ದ.ಕ ಎಸ್ಪಿ

0
image_editor_output_image2072450135-1710487766263

ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿಶೇಷ ತಂಡ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಸಿ ಬಿ ರಿಷ್ಯಂತ್‌ ಪತ್ರಿಕಾ ಗೋಷ್ಠಿ ನಡೆಸಿದರು.

ಫೆ. 7 ರಂದು ರಾತ್ರಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನ ಕೀಟಕಿಯ ಸರಳಗಳನ್ನು ತುಂಡರಿಸಿ, ಗ್ಯಾಸ್‌ ಕಟರ್‌ನಿಂದ ಸ್ಟ್ರಾಂಗ್‌ ರೂಮಿನ ಬಾಗಿಲ್ಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನ ಮಾಡಿರುತ್ತಾರೆ.

ಈ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ,

ಫೆ. 7 ರಂದು ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕ್ ನ ಕೀಟಕಿಯ ಸರಳಗಳನ್ನು ಮುರಿದು ಒಳಪ್ರವೇಶಿಸಿ ಗ್ಯಾಸ್‌ ಕಟರ್‌ನಿಂದ ಸ್ಟ್ರಾಂಗ್‌ ರೂಮಿನ ಬಾಗಿಲ್ಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನವಾಗಿರುತ್ತದೆ. ಈ ಬಗ್ಗೆ ವಿಟ್ಲ ಠಾಣಾ ಅ.ಕ್ರ. 25/2024 ಕಲಂ:457,380 ಬಾಧಂಸಂ ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು ಈ ದಿನಾಂಕ 10.03.2024 ರಂದು ಆರೋಪಿಗಳಾದ 1] ಮಹಮ್ಮದ್‌ ರಫೀಕ್ @ ಗೂಡಿನ ಬಳಿ ರಫೀಕ್‌ ಪ್ರಾಯ 35 ವರ್ಷ ತಂದೆ:ಇಸ್ಮಾಯಿಲ್‌ ವಾಸ:ಗೂಡಿನ ಬಳಿ ಜುಮ್ಮಾ ಮಸೀದಿ ಹತ್ತಿರ ಮನೆ, ಬಿಮೂಡಾ ಗ್ರಾಮ ಬಂಟ್ವಾಳ ತಾಲೂಕು 2] ಇಬ್ರಾಹಿಂ ಕಲಂದರ್‌ ಪ್ರಾಯ 41 ವರ್ಷ ತಂದೆ:ಅಬ್ದುಲ್‌ ಕುಂಞ ವಾಸ:ಬಿಂಗಿನಾನಿ ಮನೆ, ಮೊಗ್ರಾಳ, ಉಪ್ಪಳ ಅಂಚೆ ,ಮಂಜೇಶ್ವರ ತಾಲೂಕು 3] ದಯಾನಂದ ಎಸ್‌ ಪ್ರಾಯ 37 ವರ್ಷ ತಂದೆ:ದಿ||ಐತ ವಾಸ:ಗಾಳಿಯಡ್ಕ ಮನೆ, ಬಾಯಾರು ಗ್ರಾಮ ಮಂಜೇಶ್ವರ ತಾಲೂಕು ಎಂಬ ಆರೋಪಿಗಳನ್ನು ಬಂಧಿಸಿ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸಿ 2,40,700/- ರೂ ನಗದು , ಕಳ್ಳತನದ ಹಣದಿಂದ ಖರೀದಿಸಿದ ಗೃಹಉಪಯೋಗಿ ಸಾಮಗ್ರಿಗಳ ಮೌಲ್ಯ -2 ಲಕ್ಷ ಒಟ್ಟು ರೂ 4,40,700/- ಹಾಗೂ ರೂ 12,48,218/-ರೂ ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-01-ಎನ್‌ಜಿ-2227ನೇ ನೊಂದಣಿ ನಂಬ್ರದ ಬ್ರೀಝಾ ಕಾರು -01 ಗ್ಯಾಸ್‌ ಕಟರ್‌ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 25,70,918/- ರೂ ಎಂದು ಗುರುತಿಸಲಾಗಿದೆ.

ಆರೋಪಿಗಳಾದ 1] ಮಹಮ್ಮದ್‌ ರಫೀಕ್ @ ಗೂಡಿನ ಬಳಿ ರಫೀಕ್‌ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ -02 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್ ಠಾಣೆಯಲ್ಲಿ -02 ಪ್ರಕರಣ, ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾಯಲ್ಲಿ-01, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ -01, ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ -04, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾಯಲ್ಲಿ-01 , ಬೆಂಗಳೂರು ನಗರದ ವ್ಯಾಪ್ತಿಯಲ್ಲಿ -06 , ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಡುಪಿ ಜಿಲ್ಲೆಯಲ್ಲಿ-03, ವಿಟ್ಲ ಪೊಲೀಸ್‌ ಠಾಣೆಯಲ್ಲಿ -01 ಒಟ್ಟು 23 ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿ ಇಬ್ರಾಹಿಂ ಕಲಂದರ್‌ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 02 ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ 03, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 01, ಮೂಡಬಿದ್ರೆ ಠಾಣೆಯಲ್ಲಿ 01 ಕೇರಳ ರಾಜ್ಯದ ಕುಂಬ್ಳೆ ಪೊಲೀಸ್‌ ಠಾಣೆಯಲ್ಲಿ-01 ಒಟ್ಟು-08 ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿ ದಯಾನಂದ ಎಸ್.‌ ವಿಟ್ಲ ಪೊಲೀಸ್‌ ಠಾಣೆಯಲ್ಲಿ-01 ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಇನ್ನೂ 02 ಜನ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಮಾನ್ಯ ಶ್ರೀ ಸಿ ಬಿ ರಿಷ್ಯಂತ್‌ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಧರ್ಮಪ್ಪ ಎನ್‌ ಎಂ ಹಾಗೂ ಶ್ರೀ ರಾಜೇಂದ್ರ ಡಿ ಎಸ್‌ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.‌ ವಿಜಯ ಪ್ರಸಾದ್‌ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ನಾಗರಾಜ್‌ ಹೆಚ್‌ ಈ ರವರ ನೇತ್ರತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ನಂದಕುಮಾರ್‌, ಉದಯರವಿ, ಹರೀಶ್‌ ಕುಮಾರ್‌, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್‌ ಮೂರುಗೋಳಿ, ಉದಯ ರೈ, ರಕ್ಷೀತ್‌ ರೈ , ಪ್ರವೀಣ್‌ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್‌ ರಾವ್‌, ಶ್ರೀಧರ ಸಿ ಎಸ್‌, ಜಗದೀಶ್‌ ಅತ್ತಾಜೆ, ಹೇಮರಾಜ್‌, ಅಶೋಕ್‌, ವಿವೇಕ್‌ ಕೆ., ಕುಮಾರ್‌ ಹೆಚ್.ಕೆ. , ಸಂಪತ್‌, ದಿವಾಕರ್‌, ಸಂತೋಷ್‌ ,ಕುಮಾರ್‌ ಮಾಯಪ್ಪರವರು ಭಾಗವಹಿಸಿರುತ್ತಾರೆ. ಸದ್ರಿ ತಂಡಕ್ಕೆ ಮಾನ್ಯ ಪೊಲೀಸ್‌ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!