ತಾನು ಪ್ರೀತಿಸಿದ್ದ ಯುವತಿಯ ತಂದೆಯನ್ನೇ ಕೊಲೆ ಮಾಡಿದ ಪ್ರಿಯಕರ
ಬಾಗಲಕೋಟೆ: ತಮ್ಮ ಪ್ರೀತಿಯನ್ನು ನಿರಾಕರಿಸಿ, ನನ್ನ ಮಗಳಿಂದ ದೂರ ಇರು ಎಂದಿದ್ದಕ್ಕೆ ಯುವಕ ತಾನು ಪ್ರೀತಿಸಿದ್ದ ಯುವತಿಯ ತಂದೆಯನ್ನೇ ಕೊಲೆ ಮಾಡಿದ್ದಾನೆ.
ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಪ್ರವೀಣ್ ಕಾಂಬಳೆ ಎಂಬ ಯುವಕ ಮಚ್ಚಿನಿಂದ ಕೊಚ್ಚಿ ಸಂಗನಗೌಡ ಪಾಟೀಲ್(52) ಎಂಬುವವರ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





