March 19, 2026

ನನಗೇನಾದರು ಮೋದಿ ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ: ಕಾಂಗ್ರೆಸ್ ಮುಖಂಡನಿಂದ ವಿವಾದಾತ್ಮಕ ಹೇಳಿಕೆ

0
image_editor_output_image-1396175319-1710222668677.jpg

ಬೆಂಗಳೂರು: ಚುನಾವಣೆ ವೇಳೆ ಸಿಲಿಂಡ‌ರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್‌. ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗದ ಹಿರಿಯೂರಿನಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗನಾಗಿ ಈ ಮಾತನ್ನು ಹೇಳುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ನೀವೆಲ್ಲರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಪ್ರಶ್ನೆ ಮಾಡುವುದು ಕಲಿಯದಿದ್ದರೆ, ಮತ ಹಾಕಲು ಅರ್ಹರಲ್ಲ ಎಂದಿದ್ದಾರೆ. ಇನ್ನೇನೂ 15-20 ದಿನಗಳಲ್ಲಿ ಚುನಾವಣೆ ಆರಂಭ ಆಗಲಿದೆ. ಈಗ ಸಿಲಿಂಡ‌ರ್ ದರ 100 ರೂ. ಕಡಿಮೆ ಮಾಡಿದ್ದಕ್ಕೆ ನಮ್ಮ ಜನರಿಗೆ ಖುಷಿ ಎಂದು ವ್ಯಂಗ್ಯವಾಡಿದ ಅವರು, ನೇರವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೆ ಟೀಕಿಸಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!