ವಿಟ್ಲ ಹೊರೈಝನ್ ಶಾಲೆ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವು ಶಾಲಾ ಅಧ್ಯಕ್ಷ ಝುಬೈರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.



ಸಂಪನ್ಮೂಲ ವ್ಯಕ್ತಿಯಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಭಾಗವಹಿಸಿದ್ದರು.
ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ನೋಟರಿ ಅಬೂಬಕರ್, ಟ್ರಸ್ಟಿಗಳಾದ ಇಕ್ಬಾಲ್ ಹಳೆಮನೆ, ವಿ.ಪಿ.ಅಶ್ರಫ್, ಇಸಾಕ್ ಸಾಹೇಬ್, ಹಮೀದ್ ಬದ್ರಿಯಾ, ಅಬ್ದುಲ್ ರಹಿಮಾನ್, ಮಸೀದಿಯ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೋಶಾಧಿಕಾರಿ ಶರೀಫ್ ಪೊನ್ನೋಟು, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಸ್ತಾವನೆ ಮಾಡಿದರು. ಪುಟಾಣಿಗಳು ಸ್ವಾಗತಿಸಿ ವಂದಿಸಿದರು.





