ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸಿ ಕುಟೀರದ ಮಕ್ಕಳ ಹೆತ್ತವರ ಸಭೆ
ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಿನಾಂಕ 09-03-2024 ಶನಿವಾರದಂದು ಜೇಸಿ ಕುಟೀರದ ಪುಟಾಣಿಗಳ ಹೆತ್ತವರ ಸಭೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೈತ್ರೇಯಿ ಗುರುಕುಲದ ಮಾತೃಶ್ರೀ ಎಚ್ ಕೆ ಸಾವಿತ್ರಿ ಯವರು ಮಾತನಾಡುತ್ತಾ 5 ವರ್ಷದೊಳಗಿನ ಮಕ್ಕಳು ದೇವರ ಸಮಾನ, ಅವರಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕಾರಯುತ ಶಿಕ್ಷಣ ನೀಡಬೇಕೆಂದು ಹೆತ್ತವರಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರು ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪ್ರಶಂಶಿಸುತ್ತಾ, ಶಿಕ್ಷಕರಿಗೂ ಹಾಗೂ ಹೆತ್ತವರ ಬಗ್ಗೆ ವಹಿಸಬೇಕಾದ ಪಾತ್ರದ ಬಗ್ಗೆ ವಿವರಿಸಿದರು. ಬಳಿಕ ಮುದ್ದು ಪುಟಾಣಿಗಳಿಂದ ನೃತ್ಯ,ಸಂಸ್ಕೃತ ಶ್ಲೋಕ ವಚನ, ಸಂಗೀತ ಹಾಗೂ ಇನ್ನಿತರ ಮನೋರಂಜನೆಯ ಕಾರ್ಯಕ್ರಮಗಳು ನೆರವೇರಿತು, ಹೆತ್ತವರು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀ ಪ್ರಕಾಶ್ ಕುಕ್ಕಿಲ , ಮೋಹನ್, ಹಿರಿಯ ನಿರ್ದೇಶಕರಾದ ಹಸನ್ ವಿಟ್ಲ, ಆಡಳಿತ ಅಧಿಕಾರಿ ರಾಧಾಕೃಷ್ಣ ಎ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಪುಟಾಣಿಗಳಿಂದ ದೇವತಾ ಪ್ರಾರ್ಥನೆ ನಡೆಯಿತು, ಬಂದಂತಹ ಅತಿಥಿಗಳನ್ನು ಪ್ರಾಂಶುಪಾಲರಾದ ಜಯರಾಮ ರೈ ರವರು ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು, ಶಿಕ್ಷಕಿಯಾದ ಪವಿತ್ರ ವಂದನಾರ್ಪಣೆಗೈದರು, ಶಿಕ್ಷಕಿ ದೀಪ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಸಹಕರಿಸಿದರು.






