May 6, 2026

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಬಾಲ ಮಂಜುನಾಥ ಸ್ವಾಮೀಜಿ ಬಂಧನ

0
image_editor_output_image-1812332328-1709966380256.jpg

ತುಮಕೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕುಣಿಗಲ್ ತಾಲೂಕಿನ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ದೇವಸ್ಥಾನದ ಬಾಲ ಮಂಜುನಾಥ ಸ್ವಾಮೀಜಿಯನ್ನು ಬಂಧಿಸಲಾಗಿದೆ.

ಗುಪ್ತಾಂಗ ವ್ಯಾಧಿ ವೇಳೆ ವೈದ್ಯರಿಗೆ ತೋರಿಸಿದ ವೀಡಿಯೋ ಇಟ್ಟುಕೊಂಡು ಮಠದ ಮಾಜಿ ಆಪ್ತ ಸಹಾಯಕ ಅಭಿಷೇಕ್‌ ಹಾಗೂ ಸಹಚರರು ನನ್ನನ್ನು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಸ್ವಾಮಿಜಿ ತಮ್ಮ ಹಾಲಿ ಆಪ್ತ ಸಹಾಯಕ ಅಭಿಲಾಷ್ ಮೂಲಕ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರೇ ಬಾಲ ಮಂಜುನಾಥ ಸ್ವಾಮಿಜಿಗೆ ರಿವರ್ಸ್ ಆಗಿದೆ. ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ.

ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ. ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಇಬ್ಬರನ್ನು ಈಗ ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!