May 6, 2026

ಮೈಸೂರು  ಮಾಜಿ ಪಾಲಿಕೆ ಸದಸ್ಯನ ಸಹೋದರನ ಹತ್ಯೆ 

0
image_editor_output_image-691012753-1709963807736.jpg

ಮೈಸೂರು: ಮೈಸೂರಿನ ಮಾಜಿ ಪಾಲಿಕೆ ಸದಸ್ಯನ ಸಹೋದರನ ಹತ್ಯೆ ಮಾಡಲಾಗಿದೆ. ಇಲ್ಲಿನ ರಾಜೀವ್‌ ನಗರದ ನಿಮ್ರಾ ಮಸೀದಿ ಬಳಿ ಶುಕ್ರವಾರ ರಾತ್ರಿ ಮೌಲಾನಾ ಹಾಫಿಲ್‌ ಅಕ್ಮಲ್‌ ಅವರನ್ನು ಹತ್ಯೆ ಮಾಡಲಾಗಿದೆ.

ಹತ್ಯೆಗೀಡಾದ ಅಕ್ಮಲ್‌ ಅವರು ಮಾಜಿ ಕಾರ್ಪೊರೇಟರ್ ಅಯಾಝ್‌ ಪಂಡು ಅವರ ಸಹೋದರ ಎಂದು ತಿಳಿದುಬಂದಿದೆ. ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಬೇಕರಿವೊಂದರ ಮುಂಭಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಸ್ಕೂಟರ್ ನಲ್ಲಿ ತೆರಳುತ್ತಿದ್ದ ಅಕ್ಮಲ್ ರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉದಯಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!