February 4, 2026

ವಿಟ್ಲ: ಮಾಣಿಯಲ್ಲಿ ದರೋಡೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ: ಆರೋಪ, ಪ್ರಕರಣ ದಾಖಲು

0
IMG-20240307-WA0072.jpg

ವಿಟ್ಲ: ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ ಆತನ ಪತ್ನಿ ಶಾಂತಿ ಮಾರ್ಟಿಸ್ ಇಬ್ಬರೂ ಆರೋಪಿಗಳು ಸೇರಿ ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ದರೋಡೆ ಗೈದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಣಿ ಗ್ರಾಮದ ಲಕ್ಕಪ್ಪರ ಕೋಡಿ ನಿವಾಸಿ ಸ್ಟೀವನ್ ಆಲ್ವಿನ್ ಪಾಯ್ಸ್ ಎಂಬವರು ಬೆಳಗ್ಗೆ ಅವರ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿದ್ದ ಸಮಯ ಬಂಟ್ವಾಳ ತಾಲೂಕು ಮಾಣಿ ಗ್ರಾಮಾದ ಮಾಣಿ ಜಂಕ್ಷನ್ ಗೆ ತಲುಪಿದಾಗ ಕಾರಿನಲ್ಲಿ ಬಂದ ಆರೋಪಿಗಳು ಸ್ಟೀವನ್ ರವರನ್ನು ತಡೆದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ. ಬಳಿಕ ಸ್ಟೀವನ್ ರವರ ಕುತ್ತಿಗೆಯಲ್ಲಿದ್ದ ಐದು ಪವನ್ ಚಿನ್ನದ ಸರ ಇದರ ಅಂದಾಜು ಮೌಲ್ಯ ರೂಪಾಯಿ ಎರಡು ಲಕ್ಷ ಮತ್ತು ಪರ್ಸ್ ನಲ್ಲಿದ್ದ ೧೮,೦೦೦/- ರೂಪಾಯಿ ಹಣವನ್ನು ದರೋಡೆ ಗೈದು ಅವ್ಯಾಚವಾಗಿ ನಿಂದಿಸಿ ಪರಾರಿಯಾಗಿದ್ದಾರೆ.

ಈ ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೩೪/೨೦೨೪ ಕಲಂ: ೩೪೧, ೩೫೫, ೩೨೩, ೫೦೪, ೫೦೬, ೩೯೨ ಖ/ತಿ ೩೪ ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!