February 4, 2026

ಕಡಬ: ಆಸಿಡ್‌ ದಾಳಿ ಪ್ರಕರಣ: ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕಾಲೇಜು ವಿದ್ಯಾರ್ಥಿಗಳು

0
image_editor_output_image990667005-1709824883306.jpg


 
ಕಡಬ: ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣಕ್ಕ ಸಂಬಂಧಿಸಿದಂತೆ ಆಸಿಡ್ ಎರಚಿ ಓಡುತ್ತಿದ್ದ ಆರೋಪಿ ಅಭಿನ್‌ನನ್ನು ಕಾಲೇಜು ವಿದ್ಯಾರ್ಥಿಗಳಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಕರೆದುಕೊಂಡು ಹೋಗತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಲಭ್ಯವಾಗಿದೆ. ಸದ್ಯ ಆರೋಪಿ ಅಭೀನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆತನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಆತನ ಉದ್ದೇಶ ಹಾಗೂ ಆತ ಎಲ್ಲಿಂದ ಆ್ಯಸಿಡ್ ಖರೀದಿ ಮಾಡಿದ್ದ ಹಾಗೂ ಕಡಬಕ್ಕೆ ಹೇಗೆ ಬಂದು ತಲುಪಿದ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ.. ತನಿಖೆ ವೇಳೆ ಆರೋಪಿ ಆಸಿಡ್‌ನ್ನು ಕೋಯಂಬುತ್ತೂರಿಂದ ಖರೀದಿಸಿದರುವಾಗಿ  ಬಾಯಿಬಿಟ್ಟಿದ್ದಾನೆ.

ಇಂದು ತನಿಖೆಗಾಗಿ ಆರೋಪಿಯನ್ನು ಕೋಯಂಬುತ್ತೂರಿಗೆ ಪೊಲೀಸರು ಕರೆದೊಯ್ಯಲಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿ ವಿದ್ಯಾರ್ಥಿನಿಯ ಮೇಲೆ ಸಲ್ಫ್ಯೂರಿಕ್ ಆಸಿಟ್ ಎರಚಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.”

Leave a Reply

Your email address will not be published. Required fields are marked *

error: Content is protected !!