February 1, 2026

ಉಡುಪಿ: ಧಾರ್ಮಿಕ ಸಭೆಯಲ್ಲಿ ಸ್ಪೀಕರ್ ಯು.ಟಿ ಖಾದರ್‌ ಬಗ್ಗೆ ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ ಸ್ವಾಮೀಜಿ

0
image_editor_output_image-1975565925-1709094737236.jpg

ಉಡುಪಿ: ಧಾರ್ಮಿಕ ಸಭೆಯೊಂದರಲ್ಲಿ ಉಡುಪಿ ಅದಮಾರು ಶ್ರೀ ವಿಶ್ವಪ್ರೀಯ ತೀರ್ಥರು ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್‌ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಧಾರ್ಮಿಕ ಸಭೆಯಲ್ಲಿ ಗೌರವ್ವನಿತ ಸ್ಪೀಕರ್‌ ವಿರುದ್ಧ ತೀರ ಅವಹೇಳನಕಾರಿಯಾಗಿ ಮಾತನಾಡಿದ ಸ್ವಾಮೀಜಿ “ಕನ್ನಡ ಹೋರಾಟಗಾರರು ಕನ್ನಡ ಕನ್ನಡ ಎಂದು ಹೊರಳಾಡಿಕೊಳ್ತಾರೆ. ಅವರ ಮಕ್ಕಳು ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಾರೆ. ಇವರು ಹಿಂದಿ ಬೋರ್ಡ್ ಬಗ್ಗೆ ಗಲಾಟೆ ಮಾಡ್ತಾರೆ. ಅಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯುವಾಗ ಒಬ್ಬ ಅಧ್ಯಕ್ಷ ಮೇಲ್ಗಡೆ ಕೂತಿರ್ತಾನೆ. ಅವನ ಕನ್ನಡ ಕೇಳಿದ್ದೀರಾ ? ಕೇಳಿಲ್ಲಾ ಅಂದ್ರೆ ಸರಿಯಾಗಿ ಕೇಳಿಸಿಕೊಳ್ಳಿ. ‘ಲ’ ಕಾರ ‘ಳ’ ಕಾರಗಳ ವ್ಯತ್ಯಾಸನೇ ಇಲ್ಲದ ರೀತಿ ಕನ್ನಡ ಭಾಷೆ ಬರ್ತಾ ಉಂಟು. ಆದರೆ ಕೆಲವರು ಸುಮ್ಮನೆ ಕನ್ನಡ ಕನ್ನಡ ಅಂತ ಗಲಾಟೆ ಮಾಡ್ತಾರೆ” ಎಂದು ವಿಶ್ವಪ್ರೀಯ ತೀರ್ಥರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!