ಗುಡಿಸಲಿಗೆ ಬೆಂಕಿ: ನಾಲ್ವರು ಬಾಲಕಿಯರು ಸಜೀವ ದಹನ
ಲಕ್ನೋ: ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ನಾಲ್ವರು ಬಾಲಕಿಯರು ಸಜೀವ ದಹನಗೊಂಡ ದಾರುಣ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಅಗ್ನಿ ಅವಘಡದಲ್ಲಿ ಪ್ರಿಯಾಂಶಿ (3), ಮಾನ್ವಿ (6) ಮತ್ತು ನೈನಾ (5) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನೀತು (6) ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.





