February 3, 2026

ಸುಳ್ಯ: ಪಟಾಕಿ ಸಿಡಿದು ವ್ಯಕ್ತಿಗೆ ಗಂಭೀರ ಗಾಯ

0
image_editor_output_image2080666824-1708524332536.jpg

ಸುಳ್ಯ: ಪಟಾಕಿ ಸಿಡಿಸುವ ವೇಳೆ ವ್ಯಕ್ತಿಯೋರ್ವರ ಕೈಯಲ್ಲಿ ಪಟಾಕಿ ಸಿಡಿದು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕನಕಮಜಲು ಎಂಬಲ್ಲಿ ಸಂಭವಿಸಿದೆ.

ಕನಕಮಜಲಿನ ಭಜನ ಮಂದಿರದಲ್ಲಿ ಏಕಾಹ ಭಜನೆ ಮಂಗಳವಾರ ನಡೆಯುತ್ತಿದ್ದು, ಈ ವೇಳೆ ಗ್ರಾಮದ ಗಬ್ಬಲಡ್ಕ ಚಂದ್ರಶೇಖರ ಅವರು ಪಟಾಕಿಯೊಂದನ್ನು ಸಿಡಿಸುವ ವೇಳೆ ಕೈಯಲ್ಲೇ ಸ್ಫೋಟಗೊಂಡಿದ್ದು, ಕೈಯ ಬೆರಳುಗಳಿಗೆ ಗಂಭೀರವಾಗಿ ಗಾಯವಾಗಿದೆ.

ಇನ್ನು ತಕ್ಷಣ ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!