ಕುಂಬಳೆ: ಬಸ್ ಚಾಲಕ ಹೃದಯಾಘಾತದಿಂದ ಮೃತ್ಯು
ಕುಂಬಳೆ: ಬಸ್ ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.
ಕಾಸರಗೋಡು-ಧರ್ಮತ್ತಡ್ಕ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನ ಚಾಲಕ ಕುಂಟಗರಡ್ಕದ ಅಬ್ದುಲ್ ರಹಿಮಾನ್ (42) ಮೃತ ವ್ಯಕ್ತಿ.
ಧರ್ಮತ್ತಡ್ಕದಿಂದ ಬಸ್ ಕಾಸರಗೋಡಿಗೆ ತೆರಳುತ್ತಿದ್ದು, ಕುಂಟಗರಡ್ಕಕ್ಕೆ ತಲಪಿದಾಗ ಅಬ್ದುಲ್ ರಹಿಮಾನ್‌ಗೆ ಎದೆನೋವು ಕಾಣಿಸಿಕೊಂಡಿದೆ. ಅಬ್ದುಲ್ ರಹಿಮಾನ್ ತಕ್ಷಣ ಬಸ್‌ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಆ ಬಳಿಕ ಅವರು ಕುಸಿದು ಬಿದ್ದಿದ್ದಾರೆ.




